ಅಭಿಪ್ರಾಯ / ಸಲಹೆಗಳು

ನಾಗರೀಕ ಸನ್ನದು

1.ಪೀಠಿಕೆ

ವಿಮಾ ಇಲಾಖೆಯು 1891 ರಲ್ಲಿ ದಿವಾನ್ ಸರ್ ಕೆ. ಶೇಷಾದ್ರಿ ಅಯ್ಯರ್ ರವರಿಂದ ಸ್ಥಾಪಿಸಲ್ಪಟ್ಟಿತು.  ಸರ್ಕಾರಿ ನೌಕರರಿಗೆ 55 ವರ್ಷದವರೆವಿಗೆ ವಿಮಾ ರಕ್ಷಣೆ ಹಾಗೂ ಸೇವೆಯಲ್ಲಿದ್ದಾಗ ಅಕಾಲಮರಣಕ್ಕೀಡಾದರೆ ಅವರ ಆಶ್ರಿತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಸದುದ್ದೇಶದಿಂದ ಜೀವ ವಿಮೆ ಪ್ರಾರಂಭಿಸಲಾಯಿತು. ಈ ಇಲಾಖೆಯ ನಿರ್ದೇಶನಾಲಯವು ಬೆಂಗಳೂರಿನಲ್ಲಿದ್ದು ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ವಿಮಾ ಕಛೇರಿಗಳು ಕಾರ್ಯ ನಿರ್ವಹಿಸುತ್ತಿವೆ.  ನಿರ್ದೇಶಕರು, ನಾಲ್ಕು ಉಪ ನಿರ್ದೇಶಕರು ಹಾಗೂ 39 ಜಿಲ್ಲಾ ವಿಮಾಧಿಕಾರಿ/ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ವಿಮಾ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ.

2.ದೃಷ್ಠಿಕೋನ

ಸರ್ಕಾರಿ ನೌಕರರಿಗೆ 55 ವರ್ಷದವರೆವಿಗೆ ವಿಮಾ ರಕ್ಷಣೆ ಹಾಗೂ ಸೇವೆಯಲ್ಲಿದ್ದಾಗ ಅಕಾಲಮರಣಕ್ಕೀಡಾದರೆ ಅವರ ಆಶ್ರಿತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಸದುದ್ದೇಶದಿಂದ ಜೀವ ವಿಮೆ ಪ್ರಾರಂಭಿಸಲಾಯಿತು.

3.ಧ್ಯೇಯೋದ್ದೇಶಗಳು

*   ಅರ್ಹ ಸರ್ಕಾರಿ ನೌಕರರಿಗೆ ಕಡ್ಡಾಯ ಜೀವ ವಿಮೆ.

*   ವಿಮಾದಾರರ ಅಗತ್ಯಗಳಿಗೆ ಸಾಲ ಮಂಜೂರಾತಿ.

*   ಸಕಾಲದಲ್ಲಿ ಹಕ್ಕು ಪ್ರಕರಣಗಳ ಇತ್ಯರ್ಥ.

4.ಕಾರ್ಯಚಟುವಟಿಕೆಗಳು

ಈ ಇಲಾಖೆಯ ಕಾರ್ಯಚಟುವಟಿಕೆಗಳನ್ನು 4 ಭಾಗಗಳಾಗಿ ವಿಭಜಿಸಿದ್ದು, ಅವು ಈ ಕೆಳಕಂಡಂತಿದೆ.

(ಅ)  ಅಧಿಕಾರಿ ಶಾಖೆ.

*   ರಾಜ್ಯ ಸರ್ಕಾರದ ಅರ್ಹ ನೌಕರರಿಗೆ ಕಡ್ಡಾಯ ಜೀವ ವಿಮೆ.

*   ಸಾಲ ಮಂಜೂರಾತಿ.

*   ಅವಧಿಪೂರೈಕೆ, ಮರಣಜನ್ಯ, ವಿಮಾ ತ್ಯಾಗಮೌಲ್ಯ ಪ್ರಕರಣ ಇತ್ಯರ್ಥ.

(ಆ)  ವಾಹನ ಶಾಖೆ

*   ಸರ್ಕಾರೀ ವಾಹನಗಳಿಗೆ ವಿಮೆ.

*   ಸರ್ಕಾರದ ಆರ್ಥಿಕ ಹಿತಾಸಕ್ತಿಯುಳ್ಳ ವಾಹನಗಳಿಗೆ ವಿಮೆ.

*   ವಿಮಾ ನವೀಕರಣ.

*   ಅಪಘಾತ ಸಂದರ್ಭದಲ್ಲಿ ಕ್ಲೇಮ್ ಇತ್ಯರ್ಥ.

(ಇ)  ಕುಟುಂಬ ಕಲ್ಯಾಣ ನಿಧಿ ಶಾಖೆ.

*   ನಿಗಮ, ಮಂಡಳಿ, ಕಾರ್ಪೋರೇಶನ್, ಅನುದಾನಿತ ಶಾಲೆ,ಪುರಸಭೆ ನೌಕರರ ಕುಟುಂಬ ಕಲ್ಯಾ ನಿಧಿ ಪ್ರಕರಣದ ಇತ್ಯರ್ಥದಲ್ಲಿ ಮೇಲ್ವಿಚಾರಣೆ ಹಾಗೂ ಮಂಜೂರಾತಿ.

(ಈ) ಸಾಮೂಹಿಕ ವಿಮಾ ಯೋಜನೆ.

*   ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 1-1-1982 ರಿಂದ ಕಡ್ಡಾಯವಾಗಿ ಜಾರಿಗೆ ಬಂದಿದೆ.

*   ಇದು ಸ್ವಯಂ ಆರ್ಥಿಕತೆಯಿಂದ ಕೂಡಿದ ಸ್ವಾವಲಂಬಿ  ಸಮೂಹ ಯೋಜನೆ.

*   ನೌಕರರನ್ನು 4 ವರ್ಗಗಳಾಗಿ ವಿಂಗಡಿಸಲಾಗಿದೆ.

ಎ- (4 ಯೂನಿಟ್) ಬಿ- (3 ಯೂನಿಟ್)

ಸಿ- (2 ಯೂನಿಟ್) ಡಿ- (1 ಯೂನಿಟ್)

*   ಮಾಸಿಕ ವಂತಿಗೆಯನ್ನು ರೂ.60/- ರ ಗುಣಲಬ್ಧದಲ್ಲಿ ವೇತನದ ಮೂಲಕ ವಸೂಲಿ ಮಾಡಲಾಗುತ್ತದೆ.

*   ಸಂಬಂಧಪಟ್ಟ ವೇತನ ವಿತರಣಾಧಿಕಾರಿಗಳೇ ಮಂಜೂರಾತಿ ಪ್ರಾಧಿಕಾರಿಗಳಾಗಿರುತ್ತಾರೆ.

5.ವಿಮಾದಾರರ ಸನ್ನದು

*   ವಿಮಾದಾರರಿಗೆ ತ್ವರಿತಗತಿಯಲ್ಲಿ ಸೇವೆ.

*   ಪಾಲಿಸಿಗಳ ಮೇಲೆ ದ್ವೈವಾರ್ಷಿಕ ಬೋನಸ್.

*   ವಿಚಾರಣಾ ಕೌಂಟರ್/ಕುಂದುಕೊರತೆ ನಿವಾರಣೆಯ  ನಿರ್ವಹಣೆ.

*   ವಾರ್ಷಿಕ ಲೆಕ್ಕ ಚೀಟಿ ನೀಡುವಿಕೆ.

*   ಕಛೇರಿ ಕಾರ್ಯಗಳ ಗಣಕೀಕರಣ.

*   ವಿಮಾದಾರರಿಗೆ ಸೇವಾ ಸೌಲಭ್ಯ ಒದಗಿಸಲು ಕಛೇರಿಗಳ  ಆಧುನೀಕರಣ.

*   ಪ್ರತೀ ತಿಂಗಳ ಎರಡನೇ ಶುಕ್ರವಾರ ಅಪರಾಹ್ನ 3.00 ರಿಂದ  5.00 ರವರೆಗೆ ಗ್ರಾಹಕಪರ ಚಟುವಟಿಕೆ.

6.ವಿಮಾದಾರರ ಸಹಭಾಗಿತ್ವ

ಇಲಾಖೆಯ ವಿಮಾ ಸೇವೆಯು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ.  ಸರ್ಕಾರಿ ನೌಕರರೆ ಇಲಾಖೆಯ ಗ್ರಾಹಕ ರಾಗಿದ್ದಾರೆ.  ಪ್ರೀಮಿಯಂ ಹಾಗೂ ಸಾಲದ ಕಂತುಗಳ ಕಾಲೋಚಿತ (up to date) ನಿರ್ವಹಣೆಗೆ ಸಂಬಂಧಪಟ್ಟ ವಿಮಾ ಕಛೇರಿಗಳಿಗೆ ಕಾಲಕಾಲಕ್ಕೆ ವರ್ಗಾವಣಾ ಮಾಹಿತಿ ನೀಡುವ ಮೂಲಕ ಯಶಸ್ವೀ ವಿಮಾ ಸೇವೆಯಲ್ಲಿ ವಿಮಾದಾರರ ಸಹಭಾಗಿತ್ವ ಅಗತ್ಯ.

7.ದೂರು ಮತ್ತು ಕುಂದುಕೊರತೆ

ಕರ್ನಾಟಕ ಮಾಹಿತಿ ಪಡೆಯಲು ಹಕ್ಕು ಅಧಿನಿಯಮ, 2005 ರ ಅಡಿಯಲ್ಲಿ ಇಲಾಖಾ ಕಾರ್ಯಚಟುವಟಿಕೆಗಳ ತಿಳಿಯಪಡಿಸುವಿಕೆಗಾಗಿ ಈ ಕೆಳಕಂಡ ಪ್ರಾಧಿಕಾರಗಳನ್ನು ನಿಗದಿಗೊಳಿಸಲಾಗಿದ್ದು, ವಿಮಾದಾರರು ಕುಂದುಕೊರತೆ ಶೀಘ್ರ ನಿವಾರಣೆಗಾಗಿ ಸದರೀ ಪ್ರಾಧಿಕಾರಗಳನ್ನು ಸಂಪರ್ಕಿಸಬಹುದಾಗಿದೆ.

 

 

 

ಇತ್ತೀಚಿನ ನವೀಕರಣ​ : 11-06-2020 03:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸರ್ಕಾರಿ ವಿಮಾ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080